Wednesday, February 10, 2010

Preethi Nambike Mathu Bharavase.

ಗೆಳೆಯರೇ,

ಇಂದಿನ ಯುವ ಜನತೆಯಲ್ಲಿ ಒಂದು confusion ಇದೆ.ಕೆಲವು ಏನಾದರೂ ಬದಲಾಗುವುದಿಲ್ಲ, ಅದರಲ್ಲಿ ಪ್ರೀತಿಯೂ ಒಂದು, ನಮಗೆ ಅವಕಾಶಗಳು ಹೆಚ್ಚಿರಬಹುದೇನೋ ಅಷ್ಟೇ. ಇಂದಿಗೂ ಪ್ರೀತಿಯಲ್ಲಿ ನೋವು ತಿನ್ನುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ.

ಇದರಲ್ಲಿ ಅವರದು ಏನು ತಪ್ಪಿದೆಯೋ ಇಲ್ಲವೋ ಅದರ ವಿಚಾರ ಬೇಡ, ಅದರಿಂದ ಬೇಜಾರಾಗುವುದು ಬೇಡ ಎಂದಷ್ಟೇ ನನ್ನ ವಾದ.
ಒಂದು ಹುಡುಗ ಒಂದು ಹುಡುಗಿ ಎಡೆಗೆ ಆಕರ್ಷಿತರಾಗುವುದು , ಅದು natural. ಅದು ತಪ್ಪಲ್ಲ. ಹಾಗೆಂದ ಮಾತ್ರಕ್ಕೆ ಅದು ಪ್ರೀತಿಯೆಂದು ತಿಳಿಯುವುದು ದಡ್ಡತನ. ನಮಗೆ ಯಾರ ಜೊತೆಯಾದರೂ ಸ್ವಲ್ಪ ಸಲಿಗೆ ಬೆಳದಲ್ಲಿ ಒಂದು ನಂಬಿಕೆ ಹಾಗೂ ಭರವಸೆ ಮೂಡುತ್ತದೆ, ಅದು ಪ್ರೀತಿಯಲ್ಲ, ಅದನ್ನು ಕೆಲವರು ಪ್ರೀತಿಯೆಂದು ಕಲ್ಪನೆ ಮಾಡಿಕೊಳ್ಳುತ್ತಾರೆ, ಅದು ತಪ್ಪು.

ಪ್ರೀತಿಯಲ್ಲಿ ಆಕರ್ಷಣೆಯಿರುತ್ತದೆ , ಪ್ರೀತಿಗೆ ಚೌಕಟ್ಟುಗಳು ಇರುವುದಿಲ್ಲ, ಅದು ಏನು ಬೇಕಾದರೂ ಎದುರಿಸಬಲ್ಲದಂಥ ಶಕ್ತಿ ಇರುತ್ತದೆ,ಅದಕ್ಕೆ ಕಾರಣಗಳಿರುವುದಿಲ್ಲ , ಈಗ ಎಷ್ಟೋ ಬಾರಿ ನಾವು ಕೇಳುತ್ತಿರುತ್ತೇವೆ , ಅವರು ಪ್ರೀತಿಸುತ್ತಿದ್ದರು, ಆದರೆ ಸಮಾಜದ ಹೆದರಿಕೆ ಅಥವಾ ಅಪ್ಪ ಅಮ್ಮ ಒಪ್ಪಲಿಲ್ಲವಂತೆ ಹಾಗೆಲ್ಲ, ಅದು ಶುದ್ಧ ಸುಳ್ಳು, ಪ್ರೀತಿಯಿದ್ದಲ್ಲಿ ಇದೆಲ್ಲ ಆಗುವುದಿಲ್ಲ. ನಮ್ಮಲ್ಲಿ ಆ ನಂಬಿಕೆಯನ್ನು ಹಾಗೂ ಭರವಸೆಯನ್ನು ಪ್ರೀತಿಯೆಂದು ಅರ್ಥೈಸಿ ಬಿಡುತ್ತಾರೆ, ಪ್ರೀತಿಯೆಂಬುದು ಅಗಾಧವಾದದ್ದು . ಎಲ್ಲದಿಕ್ಕಿಂತ ಮಿಗಿಲಾಗಿ ಪ್ರೀತಿಯನ್ನು ಹೃದಯಕ್ಕೆ relate ಮಾಡುವುದು ಇದೆಯಲ್ಲ, ಅದರಷ್ಟು ದಡ್ಡ concept ಇನ್ನೊಂದಿಲ್ಲ. ನಾವು ಇತರರೆಡೆಗೆ ಆಕರ್ಷಿತರಾದಾಗ ನಮ್ಮ ಮೆದುಳಿನಲ್ಲಿ ಉತ್ಹ್ಪತ್ತಿಯಾದಂತಹ harmones ನಿಂದ ನಮ್ಮ ಹೃದಯದ ಬಡಿತ ಏರಿಳಿತವಾಗುತ್ತದೆಯೇ ಹೊರತು ಇನ್ನೇನಿಲ್ಲ. ಇದನ್ನು ಈಗಿನ ಸಿನಿಮಾಗಳಲ್ಲಿ ಎಷ್ಟು ಪ್ರಭಾವಿತವಾಗಿ ಬಿಂಬಿಸುತ್ತಾರೆಂದರೆ ಎಂಥವರೂ ಇದನ್ನು ನಂಬಿ ಬಿಡುತ್ತಾರೆ. So ಈ ಪ್ರೀತಿ ನಂಬಿಕೆ ಹಾಗೂ ಭರವಸೆ ನಡುವಿನ ಈ ಸಣ್ಣ ಗೆರೆಯನ್ನು ನೀವು ತಿಳಿಯಬೇಕು ಹಾಗೂ ಅರ್ಥ ಮಾಡಿಕೊಳ್ಳಬೇಕು. "ಅವಸರವೇ ಅಪಘಾತಕ್ಕೆ ಕಾರಣ" ಎಂಬಂತೆ ಪ್ರೀತಿಯಲ್ಲಿ ಮುನ್ನುಗ್ಗಬೇಡಿ.

ಈ ಲೇಖನದಿಂದ ಇದು ಬೇರೆಯವರಿಗೂ ಉಪಯೋಗವಾದಲ್ಲಿ ಅವರಿಗೂ ತಿಳಿಸಿ.


ನಿಮ್ಮ ಉತ್ತರವನ್ನು ತಿಳಿಸಿ.

ಮಜಾ ಮಾಡಿ ,
ಅಮಿತ್ ಎ